ನಮ್ಮ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಣಪ್ರದೇಶ ಹಾಗೂ ಉತ್ತರ ಕರ್ನಾಟಕದ ಮೂಲೆ-ಮೂಲೆಗಳಲ್ಲಿ ಅದೆಷ್ಟೋ ಅತ್ಯುಪಯುಕ್ತ ಕೃಷಿ ಸಂಬಂಧೀ ಅನ್ವೇಷಣೆಗಳು ಆಗಿವೆ-ಅಗುತ್ತಿವೆ. ಆಯಾ ಪ್ರದೇಶ, ಬೆಳೆ, ಮಣ್ಣು, ಅಗತ್ಯ ಇತ್ಯಾದಿಗಳನುಗುಣವಾಗಿ ದೇಶಾದ್ಯಂತ ಹಲವಾರು ಕೃಷಿಕರು ಅನುಶೋಧನೆಗಳನ್ನು ಮಾಡಿದ್ದಾರೆ. ಇವು ಸರಳ ಹಾಗೂ ಬಳಕೆದಾರಸ್ನೇಹಿ. ಕಿಸೆಗೆ ಹಗುರ! ಸ್ವಂತಕ್ಕೆಂದು ರೈತರು ಮಾಡಿಕೊಂಡ ಇಂತಹ ಹಲವು ಅನುಶೋಧನೆಗಳಿಗೆ ಕೃಷಿ ಸಮುದಾಯದ ಅನೇಕರ ಅಗತ್ಯವನ್ನು ಪೂರೈಸುವ ಸಾಮರ್ಥ್ಯವೂ ಇರುತ್ತದೆ. ದುರದೃಷ್ಟವಶಾತ್ ಇವು ಮುಖ್ಯವಾಹಿನಿಯಲ್ಲಿ ಸ್ಥಾನ ಪಡೆಯುತ್ತಿಲ್ಲ. ಕೃಷಿ, ರೈತರ ಬಗ್ಗೆ ನಿರ್ಲಕ್ಷ್ಯವೋ ಅಥವಾ ಇಂತಹ ಅನುಶೋಧನೆಗಳ ಅಂತರ್ಗತ ಸರಳತೆಯೋ, ಇವು ಕಣ್ಣಿಗೆ ಬಿದ್ದರೂ ಬಹುತೇಕರಿಗೆ ಮುಖ್ಯ ಎನಿಸುತ್ತಿಲ್ಲ. ಒಂದು ಕಾಲಘಟ್ಟದಲ್ಲಿದ್ದು ಇವು ನಿಧಾನವಾಗಿ ಮರೆಗೆ ಸರಿಯುವ ಆತಂಕವೂ ಇದೆ. ಈ ರೀತಿಯ ಅನುಶೋಧನೆಗಳ ಡಿಜಿಟಲ್ ರೂಪ ಒಂದೆಡೆ ಸಿಗುವಂತೆ ಈ ಘಟಕ ರೂಪುಗೊಂಡಿದೆ. ಇದು ರೈತರಿಗೆ, ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಯಂತ್ರಮೇಳಗಳನ್ನು ನಡೆಸುವವರಿಗೆ ಅನುಕೂಲ. ನೀವೂ ಈ ಘಟಕಕ್ಕೆ ವೀಡಿಯೋಗಳನ್ನು ಕೊಡಬಹುದು. ಸೂಚನೆ: ಇಲ್ಲಿ ವಿಷಯಕ್ಕೆ ಒತ್ತು. ವೀಡಿಯೋ ಗುಣಮಟ್ಟಕ್ಕೆ ಅಷ್ಟು ಒತ್ತು ಕೊಟ್ಟಿಲ್ಲ

This is the module exclusively developed to showcase farmer innovations that are cost effective and localized in nature. Not easily available in mainstream sources. You can also send us the videos of farmer innovations from nondescript corners of the villages for wider audience reach. This may help to reduce drudgery of farming and further scaling up of useful innovations. Please note: We have given importance to the subject and not much attention is given to video quality.

FARMER INNOVATIONS

ADVANCED SEARCH