OPINION

1. ‘ಕೃಷಿಕರಿಗೂ ಗಣಕಯಂತ್ರದ ಉಪಯೋಗ ಸಿಗುವಂತಾಗಬೇಕು’ ಎಂಬ ಮಾತು ಆಗಾಗ ಕೇಳುತ್ತಿರುತ್ತೇವೆ. ಈ ನಿಟ್ಟಿನಲ್ಲಿ ಒಂದಷ್ಟು ಕೆಲಸಗಳೂ ಆಗಿವೆ. ಆದರೆ, ಗಣಕಯಂತ್ರ ಕೃಷಿಕರಿಗೆ ಯಾವ್ಯಾವ ವಿಚಾರಗಳಲ್ಲಿ ಪ್ರಯೋಜನ ತರಬಹುದು? ಇದಕ್ಕಾಗಿ ಏನು ಕ್ರಮ, ಬದಲಾವಣೆ ಕೈಗೊಳ್ಳಬೇಕು? ಏನು ತಂತ್ರಾಂಶ ಅಭಿವೃದ್ಧಿಗೊಳಿಸಬೇಕು? ಈ ನಿಟ್ಟಿನಲ್ಲಿ ನಮ್ಮದಿನ್ನೂ ಅಂಬೆಗಾಲು. ಮಾರುಕಟ್ಟೆ ಕುದುರಿಸಲು ಮತ್ತು ಮಾಹಿತಿ ತಿಳಿಸಲು – ಇವೆರಡು ಕಂಪ್ಯೂಟರುಗಳು ರೈತರಿಗೆ ಸಹಾಯವಾಗಬಲ್ಲ ಕ್ಷೇತ್ರಗಳು. ಆದರೆ ಕೃಷಿಕರ ತಳಮಟ್ಟದ ಅಗತ್ಯ, ತೊಡಕು, ಬೇಕುಗಳ ಸ್ಪಷ್ಟ ಕಲ್ಪನೆ ಇದ್ದವರಷ್ಟೇ ಈ ವಿಚಾರದಲ್ಲಿ ಪೂರ್ತಿ ನ್ಯಾಯ ಸಲ್ಲಿಸಬಲ್ಲರು. ‘ಚಪ್ಪಲಿ ಎಲ್ಲಿ ಕಚ್ಚುತ್ತದೆ’ ಎಂಬ ಅರಿವು ಇದ್ದವರು ಮಾತ್ರ ಕಂಪ್ಯೂಟರ್ ಯಾವ್ಯಾವ ರೀತಿಯಲ್ಲಿ ಅನ್ನದಾತನ ಸಹಾಯಕ್ಕೆ ಬರಬಹುದು, ಈ ಕೆಲಸ ಹೇಗೆ ನಿಭಾಯಿಸಬಹುದು ಎಂಬ ಚಿತ್ರ ಮನಪಟಲದಲ್ಲಿ ಕಾಣಲು ಸಾಧ್ಯ. ಹೀಗೆ ಕೃಷಿಕರ ಕಡೆಯಿಂದ ಚಿಂತಿಸಿ ರೂಪಿಸಿದ ಅಂತರ್ಜಾಲ ಸಹಾಯಿಯೊಂದು ಈಗ ಸದ್ದಿಲ್ಲದೆ ಬಳಕೆಗೆ ತೆರೆದುಕೊಂಡಿದೆ. ಕೃಷಿಕನ್ನಡ ಜಾಲತಾಣ. ಸಾಗರದ ಕೃಷಿಕುಟುಂಬದ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಅವರ ಕನಸಿನ ಯೋಜನೆಯಿದು. ನೆಲದ ಜ್ಞಾನವನ್ನು ಬೆರಳ ತುದಿಯಲ್ಲಿ ಬೇಕಾದವರಿಗೆ ತೆರೆದುಕೊಡುವ ಈ ಪ್ರಯತ್ನ ದೇಶದಲ್ಲೇ ಮೊದಲಿನದು ಅನಿಸುತ್ತದೆ. (ಜೂನ್ ೨೦೧೩ ಅಡಿಕೆ ಪತ್ರಿಕೆಯ ಸಂಪಾದಕೀಯದಿಂದ)
-ಶ್ರೀ ಪಡ್ರೆ, ಅನನ್ಯ ಕೃಷಿ ಪತ್ರಕರ್ತ ಹಾಗೂ ಕಾರ್ಯನಿರ್ವಾಹಕ ಸಂಪಾದಕ, ಅಡಿಕೆ ಪತ್ರಿಕೆ
2. Kindly accept my sincere compliments for your great effort in compiling, organizing and publishing the vastly diverse material, data and information on the agriculture related issues of Karnataka,through the website `Krishikannada.com’. I was amazed by your single handed effort in building this website and its database. This effort that could only be, and should have been, executed by the institutes and or universities, is so impressively done by you. It is said, that more often it is individuals than organizations, that build a nation and contribute to the growth and development. Your website is an illustration of this truth. Kudos again and good luck.
– Professor K. N. Ganeshaiah,  Noted Scientist and a Novelist, University of Agricultural Sciences, Bangalore, India
3. ‘ಕೃಷಿಕನ್ನಡ’ ಜಾಲತಾಣ ತುಂಬಾ ಮುದ್ದಾಗಿ ರೂಪುಗೊಂಡಿದೆ. ಏಳು ವಷ೯ಗಳ ಹಿಂದೆ ನಾನು ’ಪ್ರಜಾವಾಣಿ’ಯಲ್ಲಿ ಇದ್ದಾಗ ಯುವ ಕೃಷಿವಿಜ್ಞಾನಿ ಡಾ. ಮೋಹನ ತಲಕಾಲುಕೊಪ್ಪ ಅವರು ಪದೇ ಪದೇ ನನ್ನ ಡೆಸ್ಕ್ ಬಳಿ ಬರುತ್ತಿದ್ದರು. ಲೇಖನ ಕೊಡಲಿಕ್ಕೆ ಅಲ್ಲ, ಬೇಡಲಿಕ್ಕೆ! ’ಪ್ರಜಾವಾಣಿ’ಯಲ್ಲಿ ಅದುವರೆಗೆ ಪ್ರಕಟವಾಗಿದ್ದ ಎಲ್ಲ ಕೃಷಿ ಲೇಖನಗಳೂ ತಮಗೆ ಬೇಕು ಎಂದು ಅವರು ವಿನಂತಿ ಮಾಡಿಕೊಳ್ಳುತ್ತಿದ್ದರು. ಮೈಕ್ರೋಫಿಲ್ಮ್ ರೂಪದಲ್ಲಿದ್ದ ಅವನ್ನೆಲ್ಲ ಪಡೆಯುವುದೆಂದರೆ ಆರೆಂಟು ತಿಂಗಳುಗಳ ಶ್ರಮವೇ ಬೇಕಾಗುತ್ತದೆ, ವೆಚ್ಚದ ಹೊರೆಯೂ ಭಾರೀ ಆಗುತ್ತದೆ ಎಂದೆಲ್ಲ ಹೇಳಿದರೆ ಅವರು ನಿರಾಶರಾಗಿ ಹೊರಡುತ್ತಿರಲಿಲ್ಲ. ಮೈಕ್ರೊಫಿಲ್ಮ್ ಕಂತೆಕಂತೆಗಳ ಅಟ್ಟಣಿಗೆಯನ್ನು ತೋರಿಸಿ, ಹಿಂದಿನ ಐವತ್ತು ವಷ೯ಗಳ ಈ ದಾಖಲೆಗಳನ್ನೆಲ್ಲ ಸ್ಕ್ಯಾನ್ ಮಾಡಲು ಒಬ್ಬರಿಂದ ಸಾಧ್ಯವಿಲ್ಲವೆಂದು ವಿವರಿಸಿದರೂ ನಿರಾಶರಾಗಿಲ್ಲ. ’ಸುಧಾ’ ಸಂಗ್ರಹವನ್ನೂ ನೋಡುತ್ತೇನೆ, ’ಮಯೂರ’ದಲ್ಲಿ ಕೃಷಿಕನ ಕಥೆ ಬಂದರೂ ನೋಡುತ್ತೇನೆ ಕನ್ನಡದ ಎಲ್ಲ ಪತ್ರಿಕಾ ಕಚೇರಿಗಳಿಗೂ ಹೋಗಿ ಎಲ್ಲವನ್ನೂ ಸಂಗ್ರಹಿಸುತ್ತೇನೆ’ ಎಂದು ಹೇಳುತ್ತಿದ್ದರು.ಅವರ ಬೆಟ್ಟದಷ್ಟು ಕನಸು ಇಷ್ಟವಾಯಿತಾದರೂ ಇದೊಂದು ಆರಂಭಿಕ ಉತ್ಸಾಹವೆಂದೂ ಅಡೆತಡೆಗಳು ಹೆಚ್ಚಿದಂತೆ ಕ್ರಮೇಣ ಇವರ ’ಹುಚ್ಚು’ ಇಳಿಯುತ್ತದೆಂದೂ ನಾವೆಣಿಸಿದ್ದರೆ ಇಲ್ಲ! ಮತ್ತೆ ಮುಂದಿನ ವಾರ ಹಾಜರು! ಬೇರೆ ಪತ್ರಿಕೆಗಳ ಕಚೇರಿಗಳಿಗೂ ಹೋಗಿ ಬಂದುದನ್ನು ವಿವರಿಸುತ್ತಿದ್ದರು. ಧನಸಹಾಯ ನೀಡಬಲ್ಲ ಆಸಕ್ತ ಸಂಸ್ಥೆಗಳನ್ನು ಸಂಪಕಿ೯ಸುತ್ತಿದ್ದೇನೆಂದು ಹೇಳುತ್ತಿದ್ದರು. ತಮ್ಮ ಓಡಾಟಗಳ ವರದಿಗಳನ್ನು, ಆಸೆ-ನಿರಾಸೆಗಳ ವಿವರಗಳನ್ನು, ಎದುರಾದ ಅಡೆತಡೆಗಳನ್ನು ವಿವರಿಸುತ್ತಲೇ ಮತ್ತಷ್ಟು ಉತ್ಸಾಹದ ಚಿಲುಮೆಯಾಗಿಯೇ ಕಾಣುತ್ತಿದ್ದರು. ಸ್ವಂತ ಶ್ರಮ ಹಾಕುತ್ತಿರುವುದಂತೂ ಆಯಿತು, ಪ್ರಸಂಗ ಬಂದರೆ ಸ್ವಂತ ಹಣವನ್ನೇ ವಿನಿಯೋಗಿಸಿಯಾದರೂ ನಾಡಿನ ಕೃಷಿ ಚರಿತ್ರೆಯನ್ನೆಲ್ಲ ಒಂದೆಡೆ ದಾಖಲಿಸುವ ಅನನ್ಯ ಹಂಬಲ ಅವರದ್ದಾಗಿತ್ತು.
ಒಂದು ವಿಶ್ವವಿದ್ಯಾಲಯದಂಥ ಬೃಹತ್ ಸಾಂಸ್ಥಿಕ ವ್ಯವಸ್ಥೆಗೂ ಸವಾಲೆಸೆಯುವ ಸಾಹಸ ಅದು. ಏಳು ವಷ೯ಗಳ ಅವರ ಕುಂದದ ಉತ್ಸಾಹ, ಸಡಿಲವಾಗದ ಛಲ, ಅವಿರತ ಶ್ರಮದ ಆರಂಭಿಕ ಪ್ರತಿಫಲವನ್ನು ನಾವಿಂದು ’ಕೃಷಿಕನ್ನಡ’ ಜಾಲತಾಣದಲ್ಲಿ ಕಾಣುತ್ತಿದ್ದೇವೆ. ಮೊದಲ ಇಳುವರಿ ಸೊಗಸಾಗಿದೆ. ಈ ಜಾಲತಾಣ ಇನ್ನಷ್ಟು ಮೈದುಂಬಿಕೊಳ್ಳಲಿ, ಇದಕ್ಕೆ ಸೊರಗುರೋಗವಾಗಲೀ ವೈರಸ್ ಬಾಧೆಯಾಗಲೀ ಬಾರದಿರಲಿ. ಇದು ಕೃಷಿರಂಗದಲ್ಲಿ ಆಸಕ್ತಿ ಇರುವ ಎಲ್ಲರ ಸಾಮೂಹಿಕ ತಾಣವಾಗಲಿ.
-ನಾಗೇಶ ಹೆಗಡೆ, ಪ್ರಖ್ಯಾತ ವಿಜ್ಞಾನ ಮತ್ತು ಪರಿಸರ ಪತ್ರಕರ್ತ
4. I enjoyed the website www.krishikannada.com  created by Mohan Talakalukoppa. Seems to be great potential there. The website should be very interesting and of great benefit to growers. I really like the Question and Answer module. Not sure how I can help — I think using the Latin names would be helpful or pictures when people don’t know them.
– Ken Love, Executive Director at Hawaii Tropical Fruit Growers Association, Hawaii, USA